ಶ್ರೀ ಗುರುಭ್ಯೋ ನಮಃ।
ಪರಮಗುರುಭ್ಯೋ ನಮಃ।
ಶ್ರೀಮದಾನಂದ ತೀರ್ಥ ಭಗವತ್ಪಾದಾಚಾರ್ಯ ಗುರುಭ್ಯೋ ನಮಃ।
ಪ್ರತಿದಿನ ಸರ್ವಮೂಲ ಗ್ರಂಥಗಳ ಒಂದೊಂದು ಶ್ಲೋಕಗಳು

ಶ್ರೀಮನ್ಮಹಾಭಾರತ ತಾತ್ಪರ್ಯ ನಿರ್ಣಯ

सर्वज्ञ ईश्वरतमः स च सर्वशक्तिः
पूर्णाव्ययात्मबलचित्सुखवीर्यसारः।
यस्याज्ञया रहितमिन्दिरया समेतम्
ब्रम्हेशपूर्वकमिदं न तु कस्य चेशम्।।13।।

ಸರ್ವಜ್ಞನಾದ ಶ್ರೀಮನ್ನಾರಾಯಣನು ಎಲ್ಲರಿಗೂ ನಿಯಾಮಕನಾದವನು. ಎಲ್ಲದರಲ್ಲೂ ಪೂರ್ಣ ಶಕ್ತಿ ಉಳ್ಳವನು ಹಾಗೂ ಸರ್ವೋತ್ತಮನಾದವನು. ಅವನ ಜ್ಞಾನ, ಬಲ, ಆನಂದ, ವೀರ್ಯಗಳೆಲ್ಲವು ಪರಿಪೂರ್ಣವಾಗಿವೆ. ವೃದ್ಧಿ-ಕ್ಷಯ-ನಾಶಗಳಿಂದ ರಹಿತವಾಗಿವೆ.ಅವನ ಪ್ರೇರಣೆಯಿಲ್ಲದೆ ಮಹಾಲಕ್ಷ್ಮೀ ದೇವಿಯರೂ, ಬ್ರಹ್ಮ-ರುದ್ರಾದಿಗಳೂ ಯಾವ ಕಾರ್ಯವನ್ನು ಮಾಡಲು ಅಸಮರ್ಥರು.

 ಶ್ರೀಮತ್ಸುಧೀಂದ್ರ ತೀರ್ಥ ಗುರ್ವಂತರ್ಗತ ಭಾರತೀಪತಿ ಮುಖ್ಯಪ್ರಾಣಾಂತರ್ಗತ ಶ್ರೀ ವೇದವ್ಯಾಸ ಪ್ರಿಯತಾಮ್
✍️ ಶೀಘ್ರಮೋದ

Comments

Post a Comment