ಶ್ರೀ ಗುರುಭ್ಯೋ ನಮಃ।
ಪರಮಗುರುಭ್ಯೋ ನಮಃ।
ಶ್ರೀಮದಾನಂದ ತೀರ್ಥ ಭಗವತ್ಪಾದಾಚಾರ್ಯ ಗುರುಭ್ಯೋ ನಮಃ।
ಪ್ರತಿದಿನ ಸರ್ವಮೂಲ ಗ್ರಂಥಗಳ ಒಂದೊಂದು ಶ್ಲೋಕಗಳು
ಶ್ರೀ ಮನ್ಮಹಾಭಾರತ ತಾತ್ಪರ್ಯ ನಿರ್ಣಯ

तस्योदरस्थ जगतः सदमन्दसान्द्रस्वानन्दतुष्टवपुषोsपि रमारमस्य।
भूत्यैनिजाश्रितजनस्य हि सृजस्रष्टावीक्षा बभूव परनामनिमेषकान्ते ।।३।।

ನಿರ್ದುಷ್ಟ ಪೂರ್ಣ ಆನಂದಸಾಂದ್ರನಾದ ಶ್ರೀ ಹರಿಗೆ, ಪ್ರಳಯ ಕಾಲ ಮುಗಿಯುವಾಗ ಸೃಷ್ಟಿಯೋಗ್ಯರಾದ ಚೇತನರನ್ನು ಸೃಷ್ಟಿಸುವ ಮನಸ್ಸುಂಟಾಯಿತು. ತಾನು ಸ್ವತಃ ನಿತ್ಯತೃಪ್ತನಾದರೂ ತನ್ನನ್ನೇ ಅನನ್ಯವಾಗಿ ಆಶ್ರಯಿಸಿರುವ ರಮಾಬ್ರಹ್ಮಾದಿಗಳಿಗೆ ಐಶ್ವರ್ಯ ನೀಡಲು ಉತ್ಸುಕನಾದ.

ಶ್ರೀಮತ್ಸುಧೀಂದ್ರ ತೀರ್ಥ ಗುರ್ವಂತರ್ಗತ ಭಾರತೀಪತಿ ಮುಖ್ಯಪ್ರಾಣಾಂತರ್ಗತ ಶ್ರೀ ವೇದವ್ಯಾಸ ಪ್ರಿಯತಾಮ್
✍️ ಶೀಘ್ರಮೋದ

Comments