ಶ್ರೀ ಗುರುಭ್ಯೋ ನಮಃ।
ಪರಮಗುರುಭ್ಯೋ ನಮಃ।
ಶ್ರೀಮದಾನಂದ ತೀರ್ಥ ಭಗವತ್ಪಾದಾಚಾರ್ಯ ಗುರುಭ್ಯೋ ನಮಃ।
ಪ್ರತಿದಿನ ಸರ್ವಮೂಲ ಗ್ರಂಥಗಳ ಒಂದೊಂದು ಶ್ಲೋಕಗಳು
ಶ್ರೀ ಮನ್ಮಹಾಭಾರತ ತಾತ್ಪರ್ಯ ನಿರ್ಣಯ

स्थित्यै पुनः स भगवाननिरुद्धनामा
देवी च शान्तिरभवच्छरदां सहस्रम्।
स्थित्वा स्वमूर्तिभिरमूभिरचिन्त्यशक्तिः प्रद्युम्नरूपक इमांश्चरमात्मनेsदात्।।

 ನಾರಾಯಣನು ಜಗತ್ಪಾಲನೆಗಾಗಿ ಅನಿರುದ್ಧ ರೂಪ ತಾಳಿದ, ಮಹಾಲಕ್ಷ್ಮಿ ದೇವಿಯರು ಶಾಂತಿ ನಾಮಕರಾದರು. ಹೀಗೆ ಅಚಿಂತ್ಯ ಶಕ್ತಿಯಾದ ಭಗವಂತನು ಈ ನಾಲ್ಕೂ ರೂಪಗಳಿಂದ ಮನುಷ್ಯಮಾನದ ಒಂದು ಸಾವಿರ ವರ್ಷಗಳ ಕಾಲ ಇದ್ದುಕೊಂಡು, ಹಿಂದಿನ ಸೃಷ್ಟಿಯ ಲಯಕಾಲದಲ್ಲಿ ಮೂಲರೂಪಿ ನಾರಾಯಣ ರೂಪದ ಉದರದಲ್ಲಿದ್ದ ಜೀವಸಮೂಹವನ್ನು ಪ್ರದ್ಯುಮ್ನ ರೂಪದಿಂದ ತನ್ನ ಉದರದಲ್ಲಿ ಇಟ್ಟುಕೊಂಡು ಸೃಷ್ಟಿಕಾರ್ಯಕ್ಕಾಗಿ ಅನಿರುದ್ಧ ರೂಪದ ಭಗವಂತನಿಗೆ (ತನಗೆ ತಾನೇ) ನೀಡಿದನು.

ಶ್ರೀಮತ್ಸುಧೀಂದ್ರ ತೀರ್ಥ ಗುರ್ವಂತರ್ಗತ ಭಾರತೀಪತಿ ಮುಖ್ಯಪ್ರಾಣಾಂತರ್ಗತ ಶ್ರೀ ವೇದವ್ಯಾಸ ಪ್ರಿಯತಾಮ್
✍️ ಶೀಘ್ರಮೋದ

Comments