ಶ್ರೀ ಗುರುಭ್ಯೋ ನಮಃ।
ಪರಮಗುರುಭ್ಯೋ ನಮಃ।
ಶ್ರೀಮದಾನಂದ ತೀರ್ಥ ಭಗವತ್ಪಾದಾಚಾರ್ಯ ಗುರುಭ್ಯೋ ನಮಃ।

ಪ್ರತಿದಿನ ಸರ್ವಮೂಲ ಗ್ರಂಥಗಳ ಒಂದೊಂದು ಶ್ಲೋಕಗಳು

ಶ್ರೀ ಮನ್ಮಹಾಭಾರತ ತಾತ್ಪರ್ಯ ನಿರ್ಣಯ
ಮಂಗಳಾಚರಣೆ


नारायणाय परिपूर्ण गुणार्णवाय
विश्वोदय स्थितिलयोन्नियतिप्रदाय।
ज्ञानप्रदाय विबुधासुरसौख्यदुःख- सत्कारणाय वितताय नमो नमस्ते।।


ಹೇ ಪರಿಪೂರ್ಣನಾದ ನಾರಾಯಣನೇ, ನೀನು ಜ್ಞಾನ ಆನಂದಾದಿ ಗುಣಗಳಿಗೆ ಕಡಲು. ಜಗತ್ತಿಗೆ ಸೃಷ್ಟಿ, ಸ್ಥಿತಿ, ಲಯ, ನಿಯಮನ ಹಾಗೂ ಜ್ಞಾನಪ್ರದನಾದವನು. ಉತ್ತಮ, ಮಧ್ಯಮ ಹಾಗೂ ಅಧಮ ಚೇತನರಿಗೆ ಕ್ರಮವಾಗಿ ಸುಖ, ಸುಖ ದುಃಖಗಳ ಮಿಶ್ರಣ ಹಾಗೂ ದುಃಖವನ್ನು ಕೊಡುವವನು, ಅಂತಹ ಸರ್ವವ್ಯಾಪಿಯಾದ ನಿನಗೆ ಪೊಡಮಡುವೆ.


ಶ್ರೀಮತ್ಸುಧೀಂದ್ರ ತೀರ್ಥ ಗುರ್ವಂತರ್ಗತ ಭಾರತೀಪತಿ ಮುಖ್ಯಪ್ರಾಣಾಂತರ್ಗತ ಶ್ರೀ ವೇದವ್ಯಾಸ ಪ್ರಿಯತಾಮ್


✍️ ಶೀಘ್ರಮೋದ

Comments