ಶ್ರೀ ಗುರುಭ್ಯೋ ನಮಃ।
ಪರಮಗುರುಭ್ಯೋ ನಮಃ।
ಶ್ರೀಮದಾನಂದ ತೀರ್ಥ ಭಗವತ್ಪಾದಾಚಾರ್ಯ ಗುರುಭ್ಯೋ ನಮಃ।
ಪ್ರತಿದಿನ ಸರ್ವಮೂಲ ಗ್ರಂಥಗಳ ಒಂದೊಂದು ಶ್ಲೋಕಗಳು
ಶ್ರೀ ಮನ್ಮಹಾಭಾರತ ತಾತ್ಪರ್ಯ ನಿರ್ಣಯ

स्रक्ष्ये हि चेतनगणान् सुखदुःखमध्य- सम्प्राप्तये तनुभृतां विहृतिं ममेच्छन्।
सोsयम् विहार इह मे तनुभृत्स्वभाव-
सम्भूतये भवति भूतिकृदेव भूत्याः।।

ಶ್ರೀ ಹರಿಯು ಲಿಂಗಭಂಗ ಮಾಡಿಕೊಂಡ ಉತ್ತಮ, ಮಧ್ಯಮ ಹಾಗೂ ಅಧಮ ಚೇತನರಿಗೆ ಅವರವರ ಸ್ವಭಾವಕ್ಕೆ ಅನುಗುಣವಾಗಿ ಸುಖ, ಸುಖ-ದುಃಖಗಳ ಮಿಶ್ರಣ ಹಾಗೂ ದುಃಖವನ್ನು ಕೊಡುವುದಕ್ಕಾಗಿ, ತಾನು ಸ್ವತಃ ತನ್ನ ಅಜಿತಾದಿ ಅನಂತ ರೂಪಗಳಿಂದ ವಿಹಾರ ಮಾಡಲಿಕ್ಕಾಗಿ ಹಾಗೂ ತನ್ನನ್ನೇ ಅನನ್ಯವಾಗಿ ಆಶ್ರಯಿಸಿರುವ ರಮಾದೇವಿಯರಿಗೆ ಅನಂತ ಐಶ್ವರ್ಯವನ್ನು ಕೊಡುವುದಕ್ಕಾಗಿ ಸೃಷ್ಟಿಕಾರ್ಯವನ್ನು ಸಂಕಲ್ಪಿಸಿದನು.

ಶ್ರೀಮತ್ಸುಧೀಂದ್ರ ತೀರ್ಥ ಗುರ್ವಂತರ್ಗತ ಭಾರತೀಪತಿ ಮುಖ್ಯಪ್ರಾಣಾಂತರ್ಗತ ಶ್ರೀ ವೇದವ್ಯಾಸ ಪ್ರಿಯತಾಮ್
✍️ ಶೀಘ್ರಮೋದ

Comments