ಶ್ರೀ ಗುರುಭ್ಯೋ ನಮಃ।
ಪರಮಗುರುಭ್ಯೋ ನಮಃ।
ಶ್ರೀಮದಾನಂದ ತೀರ್ಥ ಭಗವತ್ಪಾದಾಚಾರ್ಯ ಗುರುಭ್ಯೋ ನಮಃ।
ಪ್ರತಿದಿನ ಸರ್ವಮೂಲ ಗ್ರಂಥಗಳ ಒಂದೊಂದು ಶ್ಲೋಕಗಳು
ಶ್ರೀ ಮನ್ಮಹಾಭಾರತ ತಾತ್ಪರ್ಯ ನಿರ್ಣಯ

इत्थं विचिन्त्य परमः स तु वासुदेव-नामा बभूव निजमुक्तिपदप्रदाता।
तस्याज्ञयैव नियताsथ रमाsपि रूपं
बभ्रे द्वितीयमपि यत्प्रवदन्ति मायाम्।।६।।

ಹೀಗೆ ಆಲೋಚಿಸಿ ಪರಮಪುರುಷನಾದ ಭಗವಂತನು ಮುಕ್ತಿಪ್ರದವಾದ ವಾಸುದೇವ ರೂಪದಿಂದ ಆವಿರ್ಭವಿಸಿದನು. ಇದನ್ನು ಶಾಸ್ತ್ರದ ಭಾಷೆಯಲ್ಲಿ ಶುದ್ಧ ಸೃಷ್ಟಿ ಎನ್ನುವರು ಹಾಗೆಯೆ ಅವನ ಆಜ್ಞೆಯಂತೆ ಮಹಾಲಕ್ಷ್ಮೀ ದೇವಿಯರು ಮಾಯಾ ರೂಪದಿಂದ  ಆವಿರ್ಭವಿಸಿದರು. ಇದನ್ನು ಶಾಸ್ತ್ರಗಳಲ್ಲಿ ಪರಾಧೀನ ವಿಶೇಷಾವಾಪ್ತಿ ಎಂದು ಕರೆಯುತ್ತಾರೆ.

( ಇವೆರಡನ್ನು ಹೊರತುಪಡಿಸಿ ಭಗವಂತನು ಸಂಸಾರದಲ್ಲಿ ಇರುವ ಜೀವರಿಗೆ ಮಿಶ್ರ ಸೃಷ್ಟಿ ಎಂದರೆ ದೇಹಾದಿಗಳ ಪ್ರಾಪ್ತಿರೂಪವಾದ ಸೃಷ್ಟಿಯನ್ನೂ ಹಾಗೂ ಜಡಗಳಿಗೆ ಕೇವಲ ಸೃಷ್ಟಿ ಎಂದರೆ ಹಿಂದೆ ಇಲ್ಲದ ಪದಾರ್ಥಗಳು ಹೊಸದಾಗಿ ಹುಟ್ಟಿಕೊಳ್ಳುವ ರೂಪವಾದ ಸೃಷ್ಟಿಯನ್ನು ಮಾಡುತ್ತಾನೆ.)

ಶ್ರೀಮತ್ಸುಧೀಂದ್ರ ತೀರ್ಥ ಗುರ್ವಂತರ್ಗತ ಭಾರತೀಪತಿ ಮುಖ್ಯಪ್ರಾಣಾಂತರ್ಗತ ಶ್ರೀ ವೇದವ್ಯಾಸ ಪ್ರಿಯತಾಮ್
✍️ ಶೀಘ್ರಮೋದ

Comments